ಬಾಬೂಜಿ ಎಂದೂ ಕರೆಯಲ್ಪಡುವ ಶಹಜಹಾನ್‌ಪುರದ ರಾಮಚಂದ್ರ (೧೮೯೯-೧೯೮೩), ಇವರು ಉತ್ತರ ಭಾರತದ ಉತ್ತರ ಪ್ರದೇಶದ ಒಬ್ಬ ಯೋಗಿ . ಅವರು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಸಹಜ್ ಮಾರ್ಗ್ ಅಥವಾ ಹಾರ್ಟ್‌ಫುಲ್‌ನೆಸ್ ಮೆಡಿಟೇಶನ್ ಎಂಬ ರಾಜ ಯೋಗ ಧ್ಯಾನದ ವಿಧಾನವನ್ನು ಅಭಿವೃದ್ಧಿಪಡಿಸುವುದರಲ್ಲಿ ಕಳೆದರು. ಅವರು ೧೯೪೫ ರಲ್ಲಿ ಅವರ ಶಿಕ್ಷಕರಾದ ರಾಮಚಂದ್ರ ಅವರ ಹೆಸರಿನಲ್ಲಿ ಶ್ರೀ ರಾಮ್ ಚಂದ್ರ ಮಿಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. == ಆರಂಭಿಕ ಜೀವನ == ರಾಮಚಂದ್ರ ಅವರು ೩೦ ಏಪ್ರಿಲ್ ೧೮೯೯ ರಂದು ಭಾರತದ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಜನಿಸಿದರು. ಜೂನ್ ೧೯೨೨ ರಲ್ಲಿ, ತಮ್ಮ ಇಪ್ಪತ್ತಮೂರನೇ ವಯಸ್ಸಿನಲ್ಲಿ, ಅವರು ಫತೇಘರ್‌ನಲ್ಲಿ ವಾಸಿಸುತ್ತಿದ್ದ ಆಧ್ಯಾತ್ಮಿಕ ಗುರು ರಾಮಚಂದ್ರರನ್ನು ಭೇಟಿಯಾದರು. == ಆಧ್ಯಾತ್ಮಿಕ ಜೀವನ == ಅವರು ಫತೇಘರ್‌ನ ರಾಮಚಂದ್ರ ಅವರಿಂದ ರಾಜಯೋಗ ಧ್ಯಾನ ಅಭ್ಯಾಸವನ್ನು ಕಲಿತರು. ಅವರು ಈ ಧ್ಯಾನದ ವಿಧಾನವನ್ನು ಅಭಿವೃದ್ಧಿಪಡಿಸಿದರು. ಅವರು ೧೯೪೫ ರಲ್ಲಿ ಸಹಜ್ ಮಾರ್ಗ್ ಅಥವಾ ಹಾರ್ಟ್‌ಫುಲ್‌ನೆಸ್ ಮೆಡಿಟೇಶನ್‌ ಎಂಬ ರಾಜ ಯೋಗ ಧ್ಯಾನದ ವಿಧಾನವನ್ನು ಕಲಿಸಲು ಶ್ರೀ ರಾಮ್ ಚಂದ್ರ ಮಿಷನ್ ಎಂಬ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು ಅದರ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದರು. . == ಗ್ರಂಥಸೂಚಿ == ಸಹಜ್ ಮಾರ್ಗದ ಬೆಳಕಿನಲ್ಲಿ ರಾಜಯೋಗದ ಪರಿಣಾಮಕಾರಿತ್ವ ಸಹಜ್ ಮಾರ್ಗ್ ಫಿಲಾಸಫಿ (೧೯೭೮) ವಾಯ್ಸ್ ರಿಯಲ್ - ಮೊದಲ ಆಯ್ಕೆ (೧೯೭೦) ವಾಯ್ಸ್ ರಿಯಲ್ - ಎರಡನೇ ಆಯ್ಕೆ ರಾಮಚಂದ್ರರ ಆತ್ಮಕಥನ (ಸಂಪುಟ ೧ ಮತ್ತು ೨) (೧೯೭೪) == ಉಲ್ಲೇಖಗಳು ==